Saturday, March 27, 2010

Maduve matthu U.G. Krishnamurti

ವಸಂತನ ಅಣ್ಣನ ಮದುವೆಯಾಗಿ ವರ್ಷದ ಮೇಲೆ ನಾಲ್ಕು ತಿಂಗಳಾಗಿವೆ. ಎರೆಡನೆಯವನಿಗೂ ಮದುವೆ ಮಾಡಿ ಮುಗಿಸಿ ನೆಮ್ಮದಿಯಾಗಿರೋಣ ಅನ್ನೋದು ಅವನ ಅಪ್ಪ ಅಮ್ಮನ ಆಸೆ. ಓದಾಯ್ತು, ಕೆಲಸವಾಯ್ತು, ಸ್ವಂತ ಕಾಲ ಮೇಲೆ ಗಟ್ಟಿಯಾಗಿ ನಿಂತಾಯ್ತು, ಇಷ್ಟು ನನಗೆ ಗೊತ್ತಿರೋ ಅವನ Bio-data.

ಮೈಸೂರಿನಿಂದ ಬೆಂಗಳೂರಿಗೆ ಮರಳಿ ಬರುವಾಗ ಬೇರೆಯವರನ್ನೂ ಕೇಳಿದಂತೆ ವಸಂತನನ್ನೂ ಕೇಳಿದೆ. ನೀನು ಮಾಡುವೆ ಯಾಕಾಗ್ತಾ ಇದ್ದೀಯ?

ನಾ ಕೆಣಕುತ್ತಿದ್ದೇನೆ ಅಂದುಕೊಂಡ ಅನಿಸುತ್ತೆ. IIT ಯಲ್ಲಿ ಓದಿ ಸುಪ್ರಸಿದ್ಧ MNC ಯಲ್ಲಿ ಕೆಲಸ ಮಾಡ್ತಾ ಇರೋ ಹುಡುಗ, ಎಲ್ಲ ಕಾರಣಗಳಿಗೂ ಸಲ್ಲುವವನಾಗಿ ಹುಡುಗಿ ಹುಡುಕ್ತಾ ಇರೋ ಹುಡುಗ ಯಾವ ಉತ್ತರ ಕೊಟ್ಟಾನೋ ಅನ್ನೋದು ನನ್ನ ಕುತೂಹಲ. ಅವನು ಅದಕ್ಕೆ ಸಾಕಷ್ಟು ನೀರೂ ಎರೆದ. ಮಾತಾಡುತ್ತ ಮಾತಾಡುತ್ತ ಯು. ಜಿ. ಕೃಷ್ಣಮೂರ್ತಿ ಯಾ ಪ್ರಸ್ತಾಪ ಮಾಡಿದ. ಅವರ ಬಗ್ಗೆ ಓದಬೇಕೆಂದ.

ನನಗೆ ಯು.ಜಿ. ಯವರ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಇತ್ತೀಚಿಗೆ ಅವರ ಮರಣಾನಂತರ ಪತ್ರಿಕೆಗಳಲ್ಲಿ ಅವರ ಬಗ್ಗೆ ಓದಿದ್ದು ನೆನಪಾಯಿತು ಮನೆಗೆ ಬಂದ ನಂತರ ಗೂಗಲಿಸುತ್ತಾ ಕುಳಿತೆ.

ಯು.ಜಿ. ತಮ್ಮ ಬಗ್ಗೆಯೇ ಹೇಳಿಕೊಂಡಂತೆ we don't need to know him. ಅವರ ವಾದವನ್ನೇ ಸ್ವಲ್ಪ ಮುಂದುವರೆಸಿದರೆ, ಯಾರನ್ನೂ ಯಾರೂ ಅರಿಯುವ ಆವಶ್ಯಕತೆ ಇಲ್ಲ. ಸೊಳ್ಳೆಯೊಂದು ಮನುಷ್ಯನ ರಕ್ತ ಹೀರಿ, ಸಂತಾನೋತ್ಪತ್ತಿಯೊಂದಿಗೆ ವಂಶೋದ್ಧಾರ ನಡೆಸಿದಂತೆ, ಮನುಷ್ಯನ ಜೀವನವೂ ಯಕಶ್ಚಿತ್ ಪ್ರಾಣಿಯೊಂದರ ಬದುಕಿನಂತೆಯೇ ಇರಬೇಕು. ಯೋಚನೆ, ಆಲೋಚನೆಗಳ, ಗೊಂದಲದ ಗೂಡಾಗದೆ, ಪ್ರಕೃತಿಗೆ ಹತ್ತಿರವಾಗಿ............ ಇನ್ನೂ ಬಹಳ ಇದೆ...

ಇರುವುದು ಇಲ್ಲದೆ ಇರುವುದು ಆಗುವುದ ಆಗದೆ ಇರುವುದು... ಎಲ್ಲವನ್ನೂ ಬಿಟ್ಟು... ಅರೆರೆ ಹಿಡಿತಕ್ಕೆ ಸಿಕ್ಕೊಲ್ಲ... ತಾನು ನಿರ್ವಾಣದ ಸ್ಥಿತಿಯನ್ನು ತಲುಪಿದ್ದೇನೆ ಎಂದು ಭಾವಿಸಿದರು... ಭಾವಿಸಿದರು ಎಂದರೇನು? ತಾನಿರುವ ಸ್ಥಿತಿಯೇ ನಿರ್ವಾಣದ ಸ್ಥಿತಿ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ? conciousness ಎಂದರೇನು? ಅದು ಇದೆಯೇ?

೩೫/೩೬ ನೆ ವಯಸ್ಸಿಗೆ ತಿಯಾಸೋಫಿಕಾಲ್ ಸೊಸೈಟಿ ಗೆ ತಿಲಾಂಜಲಿಯನ್ನಿತ್ತು ನಂತರ ತನ್ನದೇ ಸಿದ್ದಾಂತಗಳನ್ನು ಮಂಡಿಸಿ .... ಸ್ವಲ್ಪ ಕಷ್ಟ ಇದೆ. ವಸಂತನಿಗೆ ಈ ಮನುಷ್ಯನ ಭಾವನೆಗಳು ಹಿಡಿತಕ್ಕೆ ಸಿಕ್ಕಿವೆ ಅನ್ನುವುದು ನನ್ನ ಗುಮಾನಿ. ಕರ್ಮ ಅಂದರೆ Action which is not a reaction ಅಂತಾರೆ. ಇದು ಸ್ವಲ್ಪ interesting ಆಗಿದೆ. ಇದರ ಬಗ್ಗೆ ಸ್ವಲ್ಪ ಆಲೋಚಿಸಬೇಕು...

ನಮ್ಮೆಲ್ಲ ಅರಿವಿನ ಮೂಲ, ಅಭಿವ್ಯಕ್ತಿಯ ಮೂಲ, ಅಸ್ತಿತ್ವದ ಮೂಲ ಎಲ್ಲವೂ ಆಲೋಚನೆಗಳಲ್ಲೇ ಹುಟ್ಟಿದ್ದು ಅನ್ನಿಸುತ್ತೆ. ಎಲ್ಲದನ್ನೂ ನಿರಾಕರಿಸಿದರೆ ಅರಿವಿನ ಮೂಲ ಸಿಕ್ಕುವುದಾದರೂ ಎಲ್ಲಿ!!!

ಕೃಷ್ಣಮೂರ್ತಿಯವರು ಇತರರಷ್ಟು popular ಆಗಿಲ್ಲ. ಅವರ ಸಿದ್ಧಾಂತಗಳೇ ಅವರನ್ನು ಸಾರ್ವಜನಿಕ ಜೀವನದಿಂದ ದೂರ ಇಟ್ಟಿದ್ದವೇನೋ ಅನ್ನಿಸುತ್ತಿದೆ. ನನ್ನನ್ನು ಅರಿತುಕೊಳ್ಳುವ ಅವಶ್ಯಕತೆ ಯಾರಿಗೂ ಇಲ್ಲ ಅಂದ ಮನುಷ್ಯನನ್ನು, ಅವನ ಯೋಚನ್ಗೆಗಳನ್ನು ಅರಿತುಕೊಳ್ಳಲು ನಾನಿನ್ನೂ ಬಹಳಷ್ಟು ರಾಗಿ ಬೀಸಬೇಕಾಗಿದೆ. ನನ್ನಂತೆಯೇ ಕುತೂಹಲದ ಪ್ರಾಣಿಗಳು ಅವರ ಹಿಂದೆ ಮುಂದೆ ಸುತ್ತುತ್ತಿದ್ದರೆನೋ ಅನ್ನಿಸುತ್ತಿದೆ...

Wkipedia ದಲ್ಲಿ ಯು.ಜಿ. ಯವರ ಕೌಟುಂಬಿಕ ಜೀವನ ಅಷ್ಟೊಂದು ಸಂತೋಷದಾಯಕವಾಗಿರಲಿಲ್ಲ ಅಂದಿದ್ದಾರೆ. ಈ ಕಾರಣದಿಂದಲೇ ಅವರು ಹೀಗಾದರೋ ಅಥವಾ ಹೀಗಾಗಿದ್ದರಿಂದಲೇ ಅವರ ಕೌಟುಂಬಿಕ ಜೀವನ ಹಾಳಾಯಿತೋ ತಿಳಿಯಲಿಲ್ಲ.